ಇದೇ ತಿಂಗಳು ಕರ್ನಾಟಕ ಲೋಕಸೇವಾ ಆಯೋಗದ ಅಡಿಯಲ್ಲಿ ನಡೆಯಬೇಕಿದ್ದ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಪರೀಕ್ಷೆಗಳು ರದ್ದಾಗಿವೆ. ಆಯೋಗದ ಅಧಿಸೂಚನೆ ಸಂಖ್ಯೆ PSC1-RTB4/2024 ದಿನಾಂಕ 20-09-2024 ಮತ್ತು ತಿದ್ದುಪಡಿ ಅಧಿಸೂಚನೆ ದಿನಾಂಕ 31.11.2024ರ ಅನ್ವಯ ಹೈದರಾಬಾದ್ ಕರ್ನಾಟಕ ವೃಂದದಡಿ ಅಧಿಸೂಚಿಸಲಾಗಿದ್ದ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ 6.9.2025, 7.9.2025 ಮತ್ತು 4.10.2025ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಈ ಪರೀಕ್ಷೆಗಳು ರದ್ದಾಗಿವೆ ಎಂದು 04.09.2025 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ…